ಜುಲೈ ೧೭ - ಜುಲೈ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೮ನೇ ದಿನ (ಅಧಿಕ ವರ್ಷದಲ್ಲಿ ೧೯೯ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೬೨ - ರಷ್ಯಾದ ಜಾರ್ ಆಗಿ ಎರಡನೇ ಕ್ಯಾಥರೀನ್ ಪಟ್ಟ ಧರಿಸಿದಳು. ೧೯೧೮ - ಬೊಲ್ಶೆವಿಕ್ ಪಕ್ಷದ ಆದೇಶದ ಮೇಲೆ ರಷ್ಯಾದ ರಾಷ್ಟ್ರೀಯ ಗೂಢಾಚಾರಿ ಸಂಸ್ಥೆ ಚೆಕ ಚಕ್ರವರ್ತಿ ಎರಡನೇ ನಿಕೊಲಸ್ ಮತ್ತು ಅವನ ಸಮೀಪದ ಕುಟುಂಬವನ್ನು ಹತ್ಯೆ ಮಾಡಿತು. ೧೯೩೬ - ಸ್ಪೇನ್ನಲ್ಲಿ ಸೈನ್ಯೆಯು ಜನಮತದಿಂದ ಆಯ್ಕೆಯಾಗಿದ್ದ ಎಡ ಪಂಥದ ಸರ್ಕಾರದ ಮೇಲೆ ದಂಗೆಯೆದ್ದು ಸ್ಪೇನ್‍ನ ಅಂತಃಕಲಹವನ್ನು ಪ್ರಾರಂಭಿಸಿತು. ೧೯೪೫ - ಎರಡನೇ ಮಹಾಯುದ್ಧದ ಮುಕ್ತಾಯದ ಬಗ್ಗೆ ನಿರ್ಧರಿಸಲು ಪಾಟ್ಸ್‍ಡಾಮ್ ಶೃಂಗಸಭೆಯ ಪ್ರಾರಂಭ. ೧೯೬೮ - ಇರಾಕ್‍ನಲ್ಲಿ ಕ್ರಾಂತಿಯಾಗಿ ಬಆತ್ ಪಕ್ಷ ಅಧಿಕಾರಕ್ಕೆ. ೧೯೭೬ - ವೈಕಿಂಗ್ ೧ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ನಿಲ್ದಾಣ ಮಾಡಿತು. == ಜನನಗಳು == ೧೪೮೭ - ಮೊದಲನೇ ಇಸ್ಮಾಯಿಲ್, ಪರ್ಶಿಯದ ಶಹ. ೧೯೫೪ - ಎಂಜೆಲ ಮೆರ್ಕೆಲ್, ಜರ್ಮನಿಯ ಛಾಂಸೆಲರ್. == ಮರಣಗಳು == ೧೭೯೦ - ಆಡಮ್ ಸ್ಮಿತ್, ಸ್ಕಾಟ್ಲೆಂಡ್ನ ಅರ್ಥಶಾಸ್ತ್ರ ತಜ್ಞ. ೧೯೧೨ - ಹೆನ್ರಿ ಪೊಯ್ನ್‍ಕರೆ, ಫ್ರಾನ್ಸ್ನ ಗಣಿತಜ್ಞ. ೧೯೧೮ - ರಷ್ಯಾದ ಕೊನೆಯ ಜಾರ್ ಎರಡನೇ ನಿಕೊಲಸ್ ಮತ್ತು ಅವನ ಸಮೀಪದ ಕುಟುಂಬ (ಹತ್ಯೆ). == ರಜೆಗಳು/ಆಚರಣೆಗಳು == ದಕ್ಷಿಣ ಕೊರಿಯ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ